Job Description: * ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ 100 CNG(ನೈಸರ್ಗಿಕ ಅನಿಲ) ಘಟಕಗಳನ್ನೂ ನಿರ್ಮಾಣ ಮಾಡಲು ಒಪ್ಪಂದ. * CNG ಘಟಕಗಳನ್ನು ನಿರ್ಮಾಣ ಮಾಡಲು ಭಾರತೀಯ ಅನಿಲ ಪ್ರಾಧಿಕಾರವು ಗೇಲ್ (GAIL) ಮತ್ತು ಕಾನ್ಫಿಡೆನ್ಸ್ ಪೆಟ್ರೋಲಿಯಂ ಇಂಡಿಯಾ ಲಿಮಿಟೆಡ್ (CPIL) ಒಪ್ಪಂದವನ್ನು ಮಾಡಿಕೊಂಡಿವೆ. * ಗೇಲ್'ನ ಮುಖ್ಯ ಪ್ರಧಾನ ವ್ಯವಸ್ಥಾಾಪಕ ವಿವೇಕ್ ವಾಥೋಡ್ಕರ್ ಹಾಗೂ ಸಿಪಿಐಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿತಿನ್ ಖರಾ ರವರು ಪರಸ್ಪರ ಒಪ್ಪಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. * ಸದ್ಯ ದೇಶಾದ್ಯಂತ 190 CNG ಘಟಕಗಳಿವೆ ಇವುಗಳ ನಿರ್ವಹಣೆಯನ್ನು ಗೇಲ್ ನೋಡಿಕೊಳ್ಳುತ್ತಿದೆ. * ಪ್ರಸ್ತುತ ನಮ್ಮ ಬೆಂಗಳೂರಿನಲ್ಲಿ ಇದೀಗ ಒಟ್ಟು 55 CNG ಘಟಕಗಳಿವೆ, ಹಾಗೂ 52 ನಗರಗಳಲ್ಲಿ ಅನಿಲ ಕೊಳವೆ ಮಾರ್ಗಗಳನ್ನೂ ಗೇಲ್ (GAIL) ನಿರ್ಮಿಸುತ್ತಿದೆ, ಇದರಿಂದ ಸರಿ ಸುಮಾರು 6.10 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಅನಿಲ ವ್ಯವಸ್ಥೆ ದೊರಕಲಿದೆ. * ಅಂದಾಜು 3 ವರ್ಷಗಳಲ್ಲಿ 100 CNG ಘಟಕಗಳನ್ನು ನಿರ್ಮಿಸುವ ಗುರಿಯನ್ನು ಗೇಲ್ - ಸಿಪಿಐಎಲ್ ಹೊಂದಿವೆ.