Job Description: * ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಆಸೆಪಡುವ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ಅಧಿಕೃತ ಘೋಷಣೆಯನ್ನು ನೀಡಿದೆ. * ಪ್ರಸ್ತುತ ಪೊಲೀಸ್ ಇಲಾಖೆಗಳಲ್ಲಿ ಕ್ರೀಡಾಪಟುಗಳ ನೇಮಕ್ಕೆ ಸಂಬಂಧಪಟ್ಟ ಅಂತಿಮ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದೆ ಎಂದು KSRP ಎಡಿಜಿಪಿ(ADGP)ಯಾಗಿರುವ ಅಲೋಕ್ ಕುಮಾರ್ ತಿಳಿಸಿದರು. * ಇನ್ನುಮುಂದೆ ಪ್ರತಿ ಪೊಲೀಸ್ ನೇಮಕಾತಿಯಲ್ಲಿ ಕ್ರೀಡಾ ಪಟುಗಳಿಗೆ ಶೇ.2ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ, ಮತ್ತು ಇದು ಸರಿ ಸುಮಾರು 12 ವರ್ಷಗಳ ಸುದೀರ್ಘ ಬೇಡಿಕೆ ಯಾಗಿತ್ತು ಎಂದು ತಿಳಿದು ಬಂದಿದೆ. * ಪೊಲೀಸ್ ಇಲಾಖೆಯ ಕಾನ್ ಸ್ಟೇಬಲ್, ಸಬ್ ಇನ್ಸ್ಪೆಕ್ಟರ್,ಡಿವೈಎಸ್ಪಿ, ಈ ತರಹದ ಹುದ್ದೆಗಳನ್ನು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ.