Job Description: ಇತ್ತೀಚಿಗೆ ಮಿಲಿಟರಿ ಡೈರೆಕ್ಟ್ ಜಾಲತಾಣ ವಿವಿಧ ರಾಷ್ಟ್ರಗಳ ರಕ್ಷಣಾ ಸಾಮರ್ಥ್ಯದ ಕುರಿತು ವರದಿ ಪ್ರಕಟಿಸಿದೆ, ಈ ವರದಿಯ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ : * ಒಟ್ಟು 100 ಅಂಕಗಳಲ್ಲಿ 82 ಅಂಕ ಗಳಿಸಿದ ಚೀನಾ ವಿಶ್ವದಲ್ಲಿ ಅತ್ಯಂತ ಬಲಿಷ್ಟ ಸೇನೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ನಂತರದಲ್ಲಿ ಅಮೆರಿಕ 79 ಅಂಕಗಳೊಂದಿಗೆ ಎರಡನೇ ಸ್ಥಾನಪಡೆದಿದೆ. * 69 ಅಂಕ ಪಡೆದಿರುವ ರಶ್ಯಾ ಮೂರನೇ ಸ್ಥಾನ ಹಾಗು 61 ಅಂಕ ಪಡೆದಿರುವ ಭಾರತ ನಾಲ್ಕನೇ ಸ್ಥಾನ ಪಡೆದಿವೆ ಎಂದು 'ಮಿಲಿಟರಿ ಡೈರೆಕ್ಟ್' ಅಧ್ಯಯನ ವರದಿ ತಿಳಿಸಿದೆ. * ಫ್ರಾನ್ಸ್ 58 ಅಂಕಗಳೊಂದಿಗೆ ಐದನೇ ಸ್ಥಾನ, ಬ್ರಿಟನ್ 43 ಅಂಕಗಳೊಂದಿಗೆ 9ನೇ ಸ್ಥಾನ ಪಡೆದಿವೆ. * ಈ ಅಧ್ಯಯನ ವರದಿಯನ್ನು ರಕ್ಷಣಾ ಕ್ಷೇತ್ರಕ್ಕೆ ಅನುದಾನ, ಸಕ್ರಿಯ ಮತ್ತು ಸಕ್ರಿಯವಲ್ಲದ ಸೇನಾ ಸಿಬಂದಿಗಳ ಸಂಖ್ಯೆ, ವಾಯುಪಡೆ, ನೌಕಾಬಲ, ಭೂಸೇನೆ ಮತ್ತು ಪರಮಾಣು ಶಸ್ತ್ರಗಳ ಸಂಪನ್ಮೂಲ, ಸರಾಸರಿ ವೇತನ, ಆಯುಧಗಳ ತೂಕವನ್ನು ಪರಿಗಣಿಸಿ ಪ್ರಕಟಿಸಲಾಗಿದೆ. ಇದೀಗ ಯುದ್ಧ ಸಂಭವಿಸಿದರೆ ? ಒಂದು ವೇಳೆ ಪ್ರಸ್ತುತ ಯುದ್ಧವೇನಾದರೂ ಸಂಭವಿಸಿದ್ದೇ ಆದಲ್ಲಿ ಚೀನಾ ದೇಶವು ತನ್ನ ನೌಕಾಪಡೆಯಿಂದಾಗಿ ಗೆಲುವು ಪಡೆಯಲಿದೆ. ಅಮೆರಿಕದ ತನ್ನ ಸಶಕ್ತ ವಾಯುಪಡೆಯಿಂದ ವಿಜಯಶಾಲಿಯಾಗಲಿದ್ದು, ರಶ್ಯಾ ಭೂಸೇನೆಯಿಂದ ಗೆಲುವು ಪಡೆಯುವುದಾಗಿ 'ಮಿಲಿಟರಿ ಡೈರೆಕ್ಟ್' ವರದಿ ತಿಳಿಸಿದೆ.