Job Description: * 2019-20ರ ಸಾಲಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಹಣವನ್ನು ಸರಕಾರ ಬಿಡುಗಡೆಗೊಳಿಸಿದೆ. * 2020-21 ಮತ್ತು 2021-22ರ ಸಾಲಿನ ಯೋಜನೆಯನ್ನು ಹಣವನ್ನು ಕೋವಿಡ್-19 ಕಾರಣದಿಂದಾಗಿ ನಿಧಿಯನ್ನು ಬಿಡುಗಡೆಗೊಳಿಸಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಮಾಹಿತಿಯನ್ನು ನೀಡಿದರು. * 2019-20ರ ಯೋಜನೆಯ ನಿಧಿಯನ್ನು ಬಳಸಿಕೊಂಡು ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಬಹುದು ಎಂದು ತಿಳಿಸಲಾಗಿದೆ. * ಲೋಕಸಭೆಯ ಸಂಸದರು ತನ್ನ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತೀ ವರ್ಷ 5 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ನಡೆಸಲು ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಅವಕಾಶ ಇದೆ ಎಂದು ತಿಳಿಸಲಾಗಿದೆ. * ಸಂಸದರು ಆಯ್ಕೆ ಮಾಡಿದ ಕಾಮಗಾರಿಯ ಬಗ್ಗೆ ಆಯಾ ಜಿಲ್ಲಾಧಿಕಾರಿಗೆ ಆ ಕಾಮಗಾರಿಯ ಮಾಹಿತಿಯನ್ನು ಶಿಫಾರಸ್ಸು ಮಾಡಬಹುದಾಗಿದೆ. * ರಾಜ್ಯಸಭೆಯ ಸಂಸದರು ತಾವು ರಾಜ್ಯಸಭೆಗೆ ಆಯ್ಕೆಯಾದ ರಾಜ್ಯದ ಒಂದು ಅಥವಾ ಹೆಚ್ಚು ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆಯ್ಕೆ ಮಾಡಬಹುದು.