Job Description: ಖ್ಯಾತ ಕವಿ ಹಾಗೂ ಕನ್ನಡ ಸಾಹಿತ್ಯ ಲೋಕದಲ್ಲಿ, 'ಎನ್.ಎಸ್. ಎಲ್ '(NSL) ಎಂದೇ ಖ್ಯಾತಿ ಪಡೆದಿರುವ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇತ್ತೀಚಿಗೆ ನಿಧನರಾದರು. * ಇವರು 1936ರ ನವೆಂಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದ್ದರು. ಇವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. * ಇವರು MA ಪದವಿ ಯನ್ನು ಪಡೆದುಕೊಂಡಿದ್ದು, ಭಾಷಾಶಾಸ್ತ್ರ ಸಂಶೋಧಕರಾಗಿ ಕೆಲ ಕಾಲ ಕೆಲಸ ಮಾಡಿ ನಂತರದ ದಿನಗಳಲ್ಲಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ಸೇವೆ ಸಲ್ಲಿಸಿದ್ದರು. * ಎನ್.ಎಸ್. ಎಲ್ (NSL) ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಧ್ಯಾಪಕರು. ಇವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. * ಇವರ ಪ್ರಮುಖ ಕವನ ಸಂಕಲನಗಳು 'ನಿನ್ನೆಗೆ ನನ್ನ ಮಾತು', ಸುಳಿ, ದೀಪಿಕಾ, ಬಾರೋ ವಸಂತ, ಚಿತ್ರಕೂಟ, ಹೊಳೆ ಸಾಲಿನ ಮರ, ಅರುಣಗೀತೆ ಸೇರಿ ಹಲವು ಕವನ ಸಂಕಲನಗಳನ್ನು ರಚಿಸಿದ್ದಾರೆ. * ಇವರ 'ಹೊರಳು ದಾರಿಯಲ್ಲಿ ಕಾವ್ಯ' ಈ 'ವಿಮರ್ಶಾಗ್ರಂಥ'ಕ್ಕೆ 1974ರಲ್ಲಿ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ಲಭಿಸಿದೆ.