Job Description: * ಕೃಷಿ ವಿಜ್ಞಾನಿಯಾಗಿದ್ದ ಡಾ. ಎಂ. ಮಹಾದೇವಪ್ಪನವರು ಇತ್ತೀಚಿಗೆ ತಮ್ಮ 83ನೇ ವಯಸ್ಸಿನಲ್ಲಿ ವಿಧಿವಶರಾದರು. * ಡಾ. ಎಂ. ಮಹಾದೇವಪ್ಪನವರು 1937ರ ಆಗಸ್ಟ್. 4ರಂದು ಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಜನಿಸಿದ್ದರು, ಇವರು 1960ರಲ್ಲಿ ಹೆಬ್ಟಾಳಿನ ಕೃಷಿ ಕಾಲೇಜಿನಲ್ಲಿ ಪದವಿ ಪಡೆದು ಸತತವಾಗಿ 40 ವರ್ಷಗಳವರೆಗೆ ಅಧ್ಯಯನ, ಬೋಧನೆ, ಸಂಶೋಧನೆ, ಆಡಳಿತದಲ್ಲಿ ಅನೇಕ ಸಾಧನೆ ಮಾಡಿದ್ದಾರೆ. * ಇವರು 'ಮಧು, ಮಂಗಳ, ಪುಷ್ಪ, ಪ್ರಗತಿ, ವಿಕ್ರಮ, ಮುಕ್ತಿ, ಬಿಳಿಮುಕ್ತಿ, ಜಿ.ಎಂ.ಕೆ.-17′ ಹೀಗೆ ಹಲವು ಭತ್ತದ ತಳಿಗಳನ್ನು ಸಂಶೋಧಿಸಿದ್ದಾರೆ. * ರಾಷ್ಟ್ರದಲ್ಲೇ ಮೊದಲ ಬಾರಿಗೆ ಭತ್ತದಲ್ಲಿ ಹೈಬ್ರಿಡ್ (ಮಿಶ್ರ) ತಳಿಯನ್ನು ಸಂಶೋಧಿಸಿ ಭತ್ತದ ಮಹಾದೇವಪ್ಪ ಎಂದೇ ಪ್ರಖ್ಯಾತರಾಗಿ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದರು. * ಡಾ. ಎಂ. ಮಹಾದೇವಪ್ಪನವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ಕೇಂದ್ರ ಸರಕಾರವು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. * ಧಾರವಾಡದ ಕೃಷಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಬಾರಿಗೆ ಎರಡು ಬಾರಿ ಕುಲಪತಿಗಳಾಗಿದ್ದರು. ಡಾ. ಎಂ. ಮಹಾದೇವಪ್ಪನವರು ಪಡೆದ ಪ್ರಶಸ್ತಿಗಳ ಮಾಹಿತಿ: * 2005ರಲ್ಲಿ ಪದ್ಮಶ್ರೀ, 2014ರಲ್ಲಿ ಪದ್ಮಭೂಷಣ, 1981ರಲ್ಲಿ ಹೂಕರ್ ಪ್ರಶಸ್ತಿ, 1984ರಲ್ಲಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ, 1999ರಲ್ಲಿ ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, 1996ರಲ್ಲಿ ಸರ್ ಚೋಟುರಾಂ, 2009ರಲ್ಲಿ ಜೀವಮಾನ ಸಾಧನೆ, ಇನ್ನು ಹೀಗೆ ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.