Job Description: * ಭಾರತ ಸರ್ಕಾರವು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಫಿಜಿ ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. * ಪ್ರಧಾನಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಕೇಂದ್ರ ಕೃಷಿ ಸಚಿವಾಲಯ ಮತ್ತು ಫಿಜಿ ಗಣರಾಜ್ಯದ ಕೃಷಿ ಸಚಿವಾಲಯಗಳು ತಿಳುವಳಿಕೆ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು. * ಭಾರತ ಮತ್ತು ಫಿಜಿ ನಡುವಿನ ಒಪ್ಪಂದ ಎರಡೂ ದೇಶಗಳ ಖಾಸಗಿ ವಲಯಗಳ ನಡುವೆ ಜಂಟಿ ಉದ್ಯಮಗಳ ಪ್ರಚಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ನೀಡುತ್ತವೆ. * ಈ ಒಪ್ಪಂದದ ಪ್ರಕಾರ ಕೃಷಿ ಮತ್ತು ಸರಕುಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯ ಉತ್ತೇಜನಕ್ಕಾಗಿ ಉಭಯ ದೇಶಗಳು ಜಂಟಿಯಾಗಿ ಕೆಲಸ ಮಾಡಲಿವೆ.