Job Description: * ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಇತ್ತೀಚಿಗೆ ಸುಲಲಿತ ಜೀವನ ಸೂಚಂಕ ಪಟ್ಟಿ ಸಿದ್ಧಪಡಿಸಿದ್ದು, ಸುಲಲಿತ ಸುಲಭ ಜೀವನ ಸೂಚ್ಯಂಕದಲ್ಲಿ ವಾಸಕ್ಕೆ ಹೆಚ್ಚು ಯೋಗ್ಯವಾದ ನಗರಗಳ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಮೊದಲನೇ ಸ್ಥಾನ ಪಡೆದಿದೆ. * ಇನ್ನು ರಾಷ್ಟ್ರ ರಾಜಧಾನಿ ದೆಹಲಿಯು 13 ನೇ ಸ್ಥಾನ ಪಡೆದುಕೊಂಡಿದೆ. * ಇನ್ನುಳಿದಂತೆ ಪುಣೆ, ಅಹಮದಾಬಾದ್, ಚೆನ್ನೈ, ಸೂರತ್ ನಗರಗಳು ಕ್ರಮವಾಗಿ 2 ರಿಂದ 5 ನೇ ಸ್ಥಾನ ಪಡೆದುಕೊಂಡಿವೆ. * ರಾಜ್ಯದ ಅವಳಿನಗರವಾದ ಹುಬ್ಬಳ್ಳಿ-ಧಾರವಾಡ 37 ನೇ ಸ್ಥಾನ ಪಡೆದುಕೊಂಡಿದೆ. * ಉಳಿದಂತೆ 10 ಲಕ್ಷಕ್ಕಿಂತ ಕಡಿಮೆ ಜನರು ಇರುವ ನಗರಗಳ ಪಟ್ಟಿಯಲ್ಲಿ ರಾಜ್ಯದಿಂದ ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ಮಂಗಳೂರು, ತುಮಕೂರು ನಗರಗಳು ಸ್ಥಾನ ಪಡೆದುಕೊಂಡಿವೆ. * ಸುಲಲಿತ ಜೀವನ ಸೂಚ್ಯಂಕವನ್ನು ಆರ್ಥಿಕ ಸಾಮರ್ಥ್ಯ, ಜೀವನದ ಗುಣಮಟ್ಟ, ಸುಸ್ಥಿರತೆ, ನಾಗರಿಕ ಗ್ರಹಿಕೆ ಸಮೀಕ್ಷೆ ಸೇರಿ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ.