Job Description: * ಹೈದರಾಬಾದ್ ಮೂಲದ ಔಷದ ತಯಾರಿಕಾ ಸಂಸ್ಥೆಯಾದ ಭಾರತ್ ಬಯೋಟೆಕ್ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಕೋವಾಕ್ಸಿನ್ ಲಸಿಕೆ ತನ್ನ ಮೂರನೇ ಹಂತದಲ್ಲಿ ಪರೀಕ್ಷೆಯಲ್ಲಿ ಶೇಕಡಾ 81ರಷ್ಟು ಯಶಸ್ವಿಯಾಗಿದೆ. * ಪ್ರಸ್ತುತ ಭಾರತದಲ್ಲಿ ಪುಣೆಯ ಸೆರೆಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿ ಶೀಲ್ಡ್ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೊಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. * ಈಗಾಗಲೇ ಭಾರತದಲ್ಲಿ ಮೊದಲ ಹಂತದ ಲಸಿಕೆ ಅಭಿಯಾನ ಪೂರ್ಣಗೊಂಡಿದ್ದು, ಇತ್ತೀಚಿಗೆ ಎರಡನೇ ಹಂತದಲ್ಲಿ 10 ಕೋಟಿ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.