Job Description: * ಇರಾನ್ ಮತ್ತು ರಷ್ಯಾ ದೇಶಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಆಯೋಜಿಸಿರುವ ಎರಡು ದಿನಗಳ ತರಬೇತಿಯಲ್ಲಿ ಭಾರತೀಯ ನೌಕಾಪಡೆ ಭಾಗವಹಿಸಿಲ್ಲ ಎಂದು ಭಾರತೀಯ ನೌಕಾಪಡೆ ಮಾಹಿತಿಯನ್ನು ನೀಡಿದೆ. * ಈ ಹಿಂದೆ 2019 ರಲ್ಲಿ ಇರಾನ್, ರಷ್ಯಾ ಮತ್ತು ಚೀನಾ ದೇಶಗಳಿಂದ ನೌಕಾ ತರಬೇತಿಯನ್ನು ನಡೆಸಲಾಗಿತ್ತು. * ಇರಾನ್ ಮತ್ತು ರಷ್ಯಾದ ನೌಕಾ ತರಬೇತಿ ಫೆಬ್ರವರಿ 16 ರಂದು ಪ್ರಾರಂಭವಾಗಿದೆ ಹಾಗು ಇದನ್ನು ಇರಾನ್-ರಷ್ಯಾ ಮ್ಯಾರಿಟೈಮ್ ಸೆಕ್ಯುರಿಟಿ ಬೆಲ್ಟ್ 2021 ಎಂದು ಕರೆಯಲಾಗುತ್ತದೆ, ಈ ತರಬೇತಿಯಲ್ಲಿ ಭಾರತ ಭಾಗವಹಿಸುತ್ತಿಲ್ಲ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. * ಇರಾನ್ ಮತ್ತು ರಷ್ಯಾದ ಈ ನೌಕಾಪಡೆ ತರಬೇತಿಯು 17,000 ಚದರ ಕಿ.ಮೀ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ನಡೆಯಿತು. * ಈ ನೌಕಾಪಡೆ ತರಬೇತಿಯಲ್ಲಿ ವಾಯು ಗುರಿಗಳನ್ನು ಕೇಂದ್ರವಾಗಿರಿಸಿಕೊಂಡು ಗುರಿನಾಶ ಪಡಿಸುವುದು ಮತ್ತು ಸಮುದ್ರದಲ್ಲಿನ ಗುರಿಗಳನ್ನು ನಾಶಪಡಿಸುವುದು, ಹಾಗೂ ಕಡಲ್ಗಳ್ಳರಿಂದ ಅಪಹರಿಸಿದ ಹಡಗುಗಳನ್ನು ಮುಕ್ತಗೊಳಿಸುವುದು, ಈ ತರಬೇತಿಯಲ್ಲಿ ನಡೆಸಲಾಗಿತ್ತು.