Job Description: * ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ'ಯವರು ಕೇವಲ ₹5ಕ್ಕೆ ಊಟ ನೀಡುವ 'ಮಾ'- ಯೋಜನೆಗೆ ಚಾಲನೆ ನೀಡಿದ್ದಾರೆ, ಈ ಯೋಜನೆಯಿಂದ ಬಡಜನರಿಗೆ ಅತೀ ಕಡಿಮೆ ದರದಲ್ಲಿ ಊಟ ಸಿಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. * ಸ್ವಸಹಾಯ ಶಕ್ತಿ ಗುಂಪುಗಳು ಈ 'ಮಾ' ಯೋಜನೆಯ ಅಡುಗೆಮನೆಗಳ ಕಾರ್ಯ ನಿರ್ವಹಿಸಲಿವೆ, ಇವುಗಳು ಪ್ರಾರಂಭವಾದ ನಂತರ ಪ್ರತಿ ದಿನ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಊಟವನ್ನು ಬಡಜನರಿಗೆ ನೀಡಲಾಗುವದು, ಮತ್ತು ಪಶ್ಚಿಮ ಬಂಗಾಳ ರಾಜ್ಯದ ಎಲ್ಲ ಪ್ರದೇಶಗಳಲ್ಲಿ 'ಮಾ'- ಯೋಜನೆಯ ಅಡುಗೆ ಮನೆಗಳನ್ನು ಪ್ರಾರಂಭಮಾಡಲಾಗುವದಾಗಿ ಮಾಹಿತಿ ನೀಡಿದ್ದಾರೆ.