Job Description: * 2020ನೇ ಸಾಲಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನೀಡುವ“ಮಾಸ್ತಿ ಪ್ರಶಸ್ತಿ’ಯನ್ನು ಪ್ರಕಟಣೆ ಮಾಡಲಾಗಿದ್ದು, ಇದು ಮಾಸ್ತಿ ವೆಂಕಟೇಶ ಅಯ್ಯಂಗಾರ್'ರವರ 129ನೇ ಸಂಸ್ಮರಣ ವರ್ಷವಾಗಿದೆ ಹಾಗೂ ಮಾಸ್ತಿ ಪ್ರಶಸ್ತಿಯ 28ನೇ ವರ್ಷದ ಅಂಗವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಮಾಸ್ತಿ ಪ್ರಶಸ್ತಿ 6 ಜನರಿಗೆ ಲಭಿಸಿದೆ. ಮಾಸ್ತಿ ಪ್ರಶಸ್ತಿ ಪಡೆದವರ ಮಾಹಿತಿ: * ಹಿರಿಯ ಲೇಖಕಿ ಡಾ.ಸಂಧ್ಯಾ ಎಸ್. ಪೈ -ಶಿಶು ಸಾಹಿತ್ಯ ಕ್ಷೇತ್ರ , ವಿಮರ್ಶಕ ಎಸ್.ಆರ್. ವಿಜಯಶಂಕರ್ - ವಿಮರ್ಶೆ ಕ್ಷೇತ್ರ, ಪ್ರೊ. ಪುರುಷೋತ್ತಮ ಬಿಳಿಮಲೆ - ಸಂಶೋಧನೆ ಕ್ಷೇತ್ರ, ಸುಬ್ರಾಯ ಚೊಕ್ಕಾಡಿ - ಕಾವ್ಯ ಕ್ಷೇತ್ರ, ಕೇಶವ ರೆಡ್ಡಿ ಹಂದ್ರಾಳ - ಕಥೆ ಕ್ಷೇತ್ರ, ಸ. ರಘುನಾಥ - ಸೃಜನಶೀಲ ಕ್ಷೇತ್ರ, ಈ ಆರು ಜನ ಸಾಹಿತಿಗಳಿಗೆ ಮಾಸ್ತಿ ಪ್ರಶಸ್ತಿ ಲಭಿಸಿದೆ. * ಈ ಮಾಸ್ತಿ ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಮಾಸ್ತಿ ಫಲಕ ಒಳಗೊಂಡಿರುತ್ತದೆ.