Job Description: * ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಮಾ ಜೋಯಿಸ್'ರವರು ತಮ್ಮ 89ನೇ ವಯಸ್ಸಿನಲ್ಲಿ ವಿಧಿವಶರಾದರು, ರಾಮಾ ಜೋಯಿಸ್'ರವರು ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ, ಮತ್ತು ಆರ್ಎಸ್ಎಸ್ನ(RSS) ಸ್ವಯಂ ಸೇವಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. * ಕರ್ನಾಟಕದಿಂದ ರಾಜ್ಯಸಭೆಯ ಸದಸ್ಯರೂ ಹಾಗೂ ಭಾರತೀಯ ಜನತಾ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. * ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿರುವ ರಾಮಾ ಜೋಯಿಸ್'ರವರು ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 27,1931ರಂದು ಜನಿಸಿದ್ದರು, ಪ್ರಸ್ತುತ ಇವರು ಸುಪ್ರೀಂಕೋರ್ಟ್ ವಕೀಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. * ರಾಮಾ ಜೋಯಿಸ್'ರವರು, 'ಸರ್ವೀಸ್ ಅಂಡರ್ ಸ್ಟೇಟ್ ಹಿಸ್ಟಾರಿಕಲ್ ಬ್ಯಾಟಲ್', 'ನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸ್ಟಿಟ್ಯೂಷನ್', 'ರಾಜ ಧಾರ್ಮ ವಿಥ್ ದಿ ಲೆಸೆನ್ಸ್ ಆಫ್ ರಾಜ ನೀತಿ' ಹೀಗೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.