Job Description: * ಭಾರತ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 5 ವಾಹನ ಕಂಪನಿಗಳು ಇತ್ತೀಚಿಗೆ ವಾಹನಗಳ ತಯಾರಿಕಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ವರದಿಯನ್ನು ಸಲ್ಲಿಸಿದೆ. ವಾಹನಗಳ ತಯಾರಿಕೆಯನ್ನು ಸ್ಥಗಿತಗೊಳಿಸಿದ ಕಂಪನಿಗಳ ಮಾಹಿತಿ : * ಮ್ಯಾನ್ ಟ್ರಕ್ಸ್, ಜನರಲ್ ಮೋಟಾರ್ಸ್, ಹಾರ್ಲೆ ಡೇವಿಡ್ಸನ್, ಯುಎಂ ಮೋಟರ್ ಸೈಕಲ್ಸ್, ಹೋಂಡಾ ಕಾರು ಈ 5 ಕಂಪನಿಗಳು ವಾಹನಗಳ ತಯಾರಿಕೆಯನ್ನು ಸ್ಥಗಿತಗೊಳಿಸಿವೆ ಎಂದು ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಪ್ರಕಾಶ್ ಜಾವಡೇಕರ್ ಲಿಖಿತ ರೂಪದಲ್ಲಿ ಲೋಕಸಭೆಗೆ ವರದಿಯನ್ನು ನೀಡಿದ್ದಾರೆ. ಈ ಮಾಹಿತಿಯು 'ಸಿಯಾಮ್'ನಿಂದ ಪಡೆದ ಮಾಹಿತಿಯಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್' ತಿಳಿಸಿದ್ದಾರೆ.