Job Description: * ಭಾರತದ ಮೊದಲ ಆಟಿಕೆ ಮೇಳ 2021ರ ವೆಬ್ಸೈಟ್ ಅನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಮೇಳಕ್ಕೆ ಕೇಂದ್ರ ಜವಳಿ ಸಚಿವ ಸ್ಮೃತಿ ಇರಾನಿ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ರವರು ಚಾಲನೆ ನೀಡಲಿದ್ದಾರೆ. * ಇದು ಫೆಬ್ರವರಿ 27 ರಿಂದ ಮಾರ್ಚ್ 2, 2021 ರವರೆಗೆ ನಡೆಯುವ ಭಾರತದ ಮೊದಲ ಆಟಿಕೆ ಮೇಳವಾಗಿದೆ. * ಈ ಆಟಿಕೆ ಮೇಳವು ಜವಳಿ ಸಚಿವಾಲಯವು ಶಿಕ್ಷಣ ಸಚಿವಾಲಯ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಹಯೋಗದೊಂದಿಗೆ ನಡೆಯಲಿದೆ ಎಂದು ತಿಳಿದು ಬಂದಿದೆ, ಹಾಗೂ ಈ ಮೇಳದಿಂದ ಮಕ್ಕಳಿಗೆ ಸಂತೋಷದಿಂದ ಕಲಿಕೆಯನ್ನು ನೀಡುವ ಉದ್ದೇಶವಾಗಿದೆ. * ಪ್ರಸ್ತುತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗಾಂಧಿನಗರ ಸೆಂಟರ್ ಫಾರ್ ಕ್ರಿಯೇಟಿವ್ ಲರ್ನಿಂಗ್ ಆಟಿಕೆ ಮೇಳದಲ್ಲಿ ವೀಕ್ಷಣೆಗಾಗಿಡಲು 200 ಕ್ಕೂ ಹೆಚ್ಚು ಆಟಿಕೆಗಳನ್ನು ಸಮಾಗ್ರಿಗಳನ್ನು ಸಿದ್ದಪಡಿಸಲಾಗಿದೆ ಹಾಗೂ ಇದರಿಂದ ಸ್ಥಳೀಯ ಆಟಿಕೆ ಉದ್ಯಮವನ್ನು ಕಲಿಸಲು, ಕಲಿಯಲು ಮತ್ತು ಉತ್ತೇಜಿಸಲು ಮಕ್ಕಳನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಆಟಿಕೆ ಮೇಳದ ಉದ್ದೇಶ: * ಪ್ರಧಾನಿ ನರೇಂದ್ರ ಮೋದಿಯವರ ಆಗಸ್ಟ್ 30, 2020 ಮನ್ ಕಿ ಬಾತ್'ನ ಮೂಲಕ ಆಟಿಕೆ ಮೇಳದ ಆಲೋಚನೆ ತಿಳಿದು ಬಂದಿತ್ತು, ಇದರಿಂದ ಸ್ಥಳೀಯ ಆಟಿಕೆ ಮಾರುಕಟ್ಟೆಯ ಬೃಹತ್ ಸಾಮರ್ಥ್ಯ ಮತ್ತು ಸ್ಥಳೀಯ ಆಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಈ ಆಟಿಕೆ ಮೇಳದ ಆಲೋಚನೆಯನ್ನು ತಿಳಿಸಿದ್ದಾರೆ.