Job Description: * ಅಮೆರಿಕದ ಟಾಪ್ 50 ವಿಶ್ವವಿದ್ಯಾಲಯಗಳಲ್ಲಿ ಒಂದಾದ ನಾರ್ತ್ಈಸ್ಟರ್ನ್ ಯುನಿವರ್ಸಿಟಿ ಸೆಂಟರ್ ವಿಶ್ವವಿದ್ಯಾಲಯ, ಜಾಗತಿಕ ಪೌರತ್ವ ರಾಯಭಾರಿಯನ್ನಾಗಿ ಭಾರತದ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಅವರನ್ನು ನೇಮಿಸಿದೆ, ಎಂದು ವಿಶ್ವವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಮತ್ತು ಮುಖ್ಯ ಆಧ್ಯಾತ್ಮಿಕ ಸಲಹೆಗಾರ ಅಲೆಕ್ಸಾಂಡರ್ ಲೆವೆರಿಂಗ್ ಕೆರ್ನ್ ತಿಳಿಸಿದ್ದಾರೆ. * ಈ ಗೌರವವನ್ನು ಶಾಂತಿ ಕಾರ್ಯ, ಮಾನವೀಯ ಚಟುವಟಿಕೆಗಳು, ಅಧ್ಯಾತ್ಮ ಶಿಕ್ಷಣ ನಾಯಕರಾಗಿ ರವಿಶಂಕರ್ ಅವರ ಕೊಡುಗೆಗೆ ಪರಿಗಣಿಸಿ ಜಾಗತಿಕ ಪೌರತ್ವ ರಾಯಭಾರಿ ಗೌರವವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಜಾಗತಿಕ ಪೌರತ್ವ ಉದ್ಘಾಟನಾ ರಾಯಭಾರಿಯನ್ನಾಗಿ ರವಿಶಂಕರ್ ಗುರೂಜಿಯವರನ್ನು ಗೌರವಿಸಿದೆ ಎಂದು ಆಧ್ಯಾತ್ಮಿಕತೆ, ಮಾತುಕತೆ ಮತ್ತು ಸೇವೆಗಳ ನಾರ್ತ್ಈಸ್ಟರ್ನ್ ಯುನಿವರ್ಸಿಟಿ ಸೆಂಟರ್ ತಿಳಿಸಿದೆ.