Job Description: * ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಅಂಗವಿಕಲರು ಹೊಂದಿರುವ ತಮ್ಮ ಸ್ವಂತ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. * ಅಂಗವಿಕಲ ವ್ಯಕ್ತಿಗಳ ಬಳಕೆ ಮಾಡಲು ವಿನ್ಯಾಸಗೊಳಿಸಲಾಗಿರುವ ವಿಶೇಷ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ವಾಹನಗಳಿಗೆ "ಅಮಾನ್ಯ ವಾಹನಗಳು" ಎಂದು ಪರಿಗಣಿಸಲಾಗುತ್ತಿದೆ. * ಇದೀಗ 11 ರಾಜ್ಯಗಳು ಅಂಗವಿಕಲರ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಲು ಸಮ್ಮತಿಯನ್ನು ನೀಡಿವೆ, ಪ್ರಸ್ತುತ ಇದು ರಾಜ್ಯಗಳ ವ್ಯಾಪ್ತಿಗೆ ಬರಲಿದ್ದು ಇದರ ನಿರ್ಧಾರವನ್ನು ಆ ರಾಜ್ಯಗಳೇ ತಗೆದುಕೊಳ್ಳಬೇಕಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.