Job Description: * 2021ನೇ ಸಾಲಿನ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಬಾಲಕರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಈ ಬಾರಿಯ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನೀಡಲಾಗುವದು. * ಕೇಂದ್ರ ಸರ್ಕಾರವು ಪ್ರತಿವರ್ಷ ಈ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿಯನ್ನು ನೀಡುತ್ತ ಬಂದಿದ್ದು, ಈ ವರ್ಷ ದೇಶದ ಒಟ್ಟು 32 ಮಕ್ಕಳು ಆಯ್ಕೆಗೊಂಡಿದ್ದಾರೆ, ಅದರಲ್ಲಿ ಕರ್ನಾಟಕದ ಇಬ್ಬರು ಬಾಲಕರಿಗೆ ಈ ಪ್ರಶಸ್ತಿ ಲಭಿಸಿದೆ. - ಕರ್ನಾಟಕದ ಬಾಲಕರ ಹೆಸರು ಇಂತಿವೆ. * ರಾಕೇಶ್ ಕೃಷ್ಣ. * ವೀರ್ ಕಶ್ಯಪ್. ಈ ಬಾಲಕರು ಆವಿಷ್ಕಾರ ವಲಯದಲ್ಲಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಈ ಬಾರಿಯ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಡೆಯಲಿದ್ದಾರೆ.