Job Description: * ಇತ್ತೀಚಿಗೆ ಒಡಿಶಾದ ಕರಾವಳಿ ತೀರದಲ್ಲಿ ಆಕಾಶ್-ಎನ್ ಜಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಡಿಆರ್ ಡಿಒ (DRDO) ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ತಿಳಿಸಿದೆ. * ಈ ಹೊಸ ತಲೆಮಾರಿನ (New Version) ಆಕಾಶ್-ಎನ್ ಜಿ ಕ್ಷಿಪಣಿಯು ಭೂಮಿಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಯಾಗಿದೆ, ಮತ್ತು ಭಾರತದ ವೈಮಾನಿಕ ಬೆದರಿಕೆಗಳನ್ನ ನಿಗ್ರಹಿಸುವ ಗುರಿ ಹೊಂದಿದೆ. ಆಕಾಶ್ ಕ್ಷಿಪಣಿʼಯ ಪರೀಕ್ಷಾರ್ಥ ಉಡಾವಣೆ ಸಂಪೂರ್ಣ ಯಶಸ್ವಿಯಾಗಿರುವದರಿಂದ ಭಾರತವು ವೈಮಾನಿಕ ಬೆದರಿಕೆಗಳನ್ನ ನಿಗ್ರಹಿಸುವಲ್ಲಿ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಡಿಆರ್ ಡಿಒ(DRDO) ತಿಳಿಸಿದೆ.