Job Description: * ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಸ್ಸಾಂನ ಸ್ಥಳೀಯ ಬುಡಕಟ್ಟು ಸಮುದಾಯದ 1 ಲಕ್ಷ 3 ಸಾವಿರ ಜನರಿಗೆ ಜಮೀನಿನ ದಾಖಲೆ ಹಸ್ತಾಂತರಿಸುವ ರಾಜ್ಯ ಸರಕಾರದ ಯೋಜನೆಗೆ ಚಾಲನೆ ನೀಡಿದರು. * ಅಸ್ಸಾಂ ರಾಜ್ಯದ ಹಲವೆಡೆ ಸರಕಾರಿ ಜಮೀನು ಹಾಗೂ ಬುಡಕಟ್ಟು ಜಮೀನನ್ನು ಅಕ್ರಮ ವಲಸಿಗರು ಅಕ್ರಮವಾಗಿ ಪಡೆದಿರುವ ಪ್ರದೇಶಗಳನ್ನು, ಅಸ್ಸಾಂನ ರಾಜ್ಯ ಸರ್ಕಾರವು ಈ ಯೋಜನೆಯ ಮೂಲಕ ಅಲ್ಲಿನ ಸ್ಥಳೀಯರಿಗೆ ಜಮೀನಿನ ದಾಖಲೆಯನ್ನು ದೊರಕಿಸಿಕೊಟ್ಟಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.