Job Description: * ಇದೆ ಜನೇವರಿ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಬೆಂಗಳೂರಿನಲ್ಲಿ, "ಒಂದು ಭಾರತ-ಒಂದು ತುರ್ತು ಸಂಖ್ಯೆ-112" ಕಾರ್ಯಕ್ರಮದಡಿಯಲ್ಲಿ ತುರ್ತು ಸೇವೆಗಳ ಸಹಾಯ ವ್ಯವಸ್ಥೆ (ERSS)ಯ 150 ನೂತನ ವಾಹನಗಳಿಗೆ ಚಾಲನೆಯನ್ನು ನೀಡಿದರು. * ಈ ವಾಹನಗಳು ಮಹಿಳೆಯರು ಮತ್ತು ಮಕ್ಕಳು ಹಾಗೂ ಸಂಕಷ್ಟದಲ್ಲಿರುವ ನಾಗರಿಕರಿಗೆ ತುರ್ತು ಸೇವೆಯನ್ನು ನೀಡುತ್ತವೆ ಎಂದು ಸರ್ಕಾರ ತಿಳಿಸಿದೆ. * ಈ ಮೊದಲು ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಒಟ್ಟು 505 ತುರ್ತು ಸೇವೆಯ ವಾಹನಗಳು ಕಾರ್ಯ ನಿರ್ವಹಿಸುತ್ತಿರುವುದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ರವರು ತಿಳಿಸಿದ್ದಾರೆ, ಪ್ರಸ್ತುತ ಹೊಸದಾಗಿ 150 ವಾಹನಗಳನ್ನು ಮತ್ತೆ ಸೇರ್ಪಡೆ ಮಾಡಲಾಗಿದೆ.