Job Description: * ಬೆಂಗಳೂರು ನಗರದ ಮಹಿಳಾ ವಿಜ್ಞಾನಿ ರೋಹಿಣಿ ಗೋಡ್ಬೋಲೆ ಅವರು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿದ ಒಳ್ಳೆಯ ಕೆಲಸ ಮತ್ತು ಕಾರ್ಯ ಸಾಧನೆಯ ಪ್ರತಿಫಲವಾಗಿ ಇವರಿಗೆ ಫ್ರಾನ್ಸ್ ದೇಶದ ಅತ್ಯುನ್ನತ ಪ್ರಶಸ್ತಿಯಾದ 'ಆರ್ಡರ್ ನ್ಯಾಷನಲ್ ಡು ಮೆರಿಟ್ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. * ಫ್ರಾನ್ಸ್ ಮತ್ತು ಭಾರತಿಯ ವಿಜ್ಞಾನ ವಿಭಾಗದಲ್ಲಿ ಮಹಿಳೆಯರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ. * ಪ್ರಸ್ತುತ ಬೆಂಗಳೂರಿನ ವಿಜ್ಞಾನಿಯಾದ ರೋಹಿಣಿ ಗೋಡ್ಬೋಲೆ ರವರು ಸೈನ್ಸ್ ಆಫ್ ಇಂಡಿಯಾದ 3 ಅಕಾಡೆಮಿಗಳ ಚುನಾಯಿತ ಸಹವರ್ತಿಯಾಗಿ ಕೆಲಸ ಮಾಡುತ್ತಿದ್ದು, ಮತ್ತು ಇವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಹೈ ಎನರ್ಜಿ ಫಿಸಿಕ್ಸ್ ಸೆಂಟರ್ ಫಾರ್ ನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.