Job Description: * ಇತ್ತೀಚಿಗೆ ಬ್ಲೂಮ್ ಬರ್ಗ್ ಪ್ರಕಟಿಸಿದ ವರದಿಯ ಪ್ರಕಾರ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಮತ್ತು ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕಂಪನಿಯ ಸ್ಥಾಪಕರಾದ ಎಲಾನ್ ಮಸ್ಕ್ ರವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಝಾನ್ ಸ್ಥಾಪಕ ಜೆಫ್ ಬೆಝೋಸ್ ರವರಿದ್ದರು ಎಂದು ಬ್ಲೂಮ್ ಬರ್ಗ್ ತಿಳಿಸಿತ್ತು. * ಟೆಸ್ಲಾ ಕಂಪೆನಿಯ ಎಲಾನ್ ಮಸ್ಕ್ ರ ಆಸ್ತಿಯಲ್ಲಿ 1.5 ಬಿಲಿಯನ್ ಡಾಲರ್ ಹೆಚ್ಚಳ ಕಂಡಿದ್ದು, ಈಗಿನ ಅವರ ಒಟ್ಟು ಆಸ್ತಿಯು 188.5 ಬಿಲಿಯನ್ ಡಾಲರ್ ಹೆಚ್ಚಾಗಿದೆ, ಇದರಿಂದ ಎಲಾನ್ ಮಸ್ಕ್ ರವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.