Job Description: * ಪಾಕಿಸ್ತಾನವು ಸ್ವದೇಶಿ ನಿರ್ಮಿತ "ಗೈಡೆಡ್ ಮಲ್ಟಿ ಲಾಂಚ್ ರಾಕೆಟ್"ಅನ್ನುಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ರವರು ಮಾಹಿತಿಯನ್ನು ನೀಡಿದ್ದಾರೆ. * ಪಾಕಿಸ್ತಾನವು ತಯಾರಿಸಿದ ಈ ರಾಕೆಟ್ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ, ಅಲ್ಲದೆ 140 ಕಿ.ಮೀ. ವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯವನ್ನುಕೂಡ ಹೊಂದಿದೆ ಎಂದು ತಿಳಿಸಿದ್ದಾರೆ. * ಈ ರಾಕೆಟ್ ಯಶಸ್ವಿ ಉಡಾವಣೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರವರು ವಿಜ್ಞಾನಿಗಳಿಗೆ ಮತ್ತು ಸೇನಾಪಡೆಗೆ ಅಭಿನಂದನೆ ಸಲ್ಲಿಸಿದ್ದಾರೆ.