Job Description: * ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮ ಪಂಚಾಯಿತಿಯು ಮಿಷನ್ ಅಂತ್ಯೋದಯ 2020ರ ರಾಷ್ಟ್ರ ಮಟ್ಟದ ಸಮೀಕ್ಷೆಯ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ, ಎಂದು ಕೇಂದ್ರ ಗಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿಯನ್ನು ನೀಡಿದೆ. * ಗದಗಿನ ಹುಲಕೋಟಿ ಗ್ರಾಮ ಪಂಚಾಯಿತಿಯು ಗ್ರಾಮೀಣ ಜನರ ಮೂಲಸೌಕರ್ಯ ಅಭಿವೃದ್ಧಿ, ಸಾಕ್ಷರತೆ, ಕೃಷಿ, ಪಶುಸಂಗೋಪನೆ, ಕುಡಿಯುವ ನೀರಿನ ಸೌಕರ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ, ರಸ್ತೆ ಅಭಿವೃದ್ಧಿ, ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಈ ಶ್ರೇಣಿ ನೀಡಲಾಗಿದೆ. * ಈ ಮೊದಲು ಹುಲಕೋಟಿ ಗ್ರಾಮ ಪಂಚಾಯಿತಿಯು ಎರಡು ವರ್ಷಗಳಿಂದ ಐದನೇ ಸ್ಥಾನದಲ್ಲಿತ್ತು, ಪ್ರಸ್ತುತ ಈಗ ಹುಲಕೋಟಿ ಗ್ರಾಮ ಪಂಚಾಯಿತಿ ಮೊದಲನೇ ರ್ಯಾಂಕ ಪಡೆದಿದೆ ಎಂದು ಗದಗ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್.ಜನಗಿ ಹೇಳಿದ್ದಾರೆ. ಇದರ ಜೊತೆಯಲ್ಲಿ ತೆಲಂಗಾಣದ ರಾಜ್ಯದ 2 ಗ್ರಾಮ ಪಂಚಾಯ್ತಿಗಳು ಕೂಡ ಮೊದಲ ಸ್ಥಾನ ಪಡೆದುಕೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.