Job Description: * ಕಜಕಸ್ತಾನ ರಾಷ್ಟ್ರದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಮಾಡಲಾಗಿರುವುದಾಗಿ ಇಲ್ಲಿನ ರಾಷ್ಟ್ರಪತಿಯವರು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಿದ್ದಾರೆ. * 2003 ರಿಂದ ಕಜಕಸ್ತಾನದಲ್ಲಿ ಮರಣದಂಡನೆಯನ್ನು ರದ್ದುಮಾಡಲಾಗಿತ್ತು, ಆದರೂ ಭಯೋತ್ಪಾದಕ ಕೃತ್ಯ ಮತ್ತು ಗಂಭೀರ ಅಪರಾಧ ಮಾಡಿದ ವ್ಯಕ್ತಿಗಳಿಗೆ ಈ ಶಿಕ್ಷೆಯನ್ನು ನ್ಯಾಯಾಲಯಗಳು ನೀಡುತ್ತಿದ್ದವು, ಪ್ರಸ್ತುತ ಈಗ ಸಂಪೂರ್ಣ ಮರಣದಂಡನೆ ರದ್ದು ಮಾಡಲು ಕಜಕಸ್ತಾನ ರಾಷ್ಟ್ರಪತಿ "ಕಾಸಿಮ ಜೋಮಾರ್ಟ್" ಟೋಕಾಯೆವ್ ಅವರು ಒಪ್ಪಿಗೆ ನೀಡಿ ಸಹಿ ಮಾಡಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.