Job Description: ಡಿಸೆಂಬರ್ 29 ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ, ಇವರನ್ನು ಗೌರವಿಸಲು ಪ್ರತೀ ವರ್ಷ ಅವರ ಜನ್ಮ ದಿನವನ್ನು 'ವಿಶ್ವ ಮಾನವ ದಿನ' ಎಂದು ಆಚರಣೆ ಮಾಡಲಾಗುತ್ತದೆ. ಕುವೆಂಪುರವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರು 29 ಡಿಸೆಂಬರ್ 1904 ರಲ್ಲಿ ಜನಿಸಿದರು, ಹಾಗೂ ಇವರು ವಿಶ್ವ ಮಾನವ ಸಂದೇಶಗಳಾದ ಮನುಜ ಪಥ, ವಿಶ್ವಪಥ, ಸರ್ವೋದಯ, ಸಮನ್ವಯಗಳು ಈ ಜಗತ್ತೇ ಉಪಯುಕ್ತವಾದ ಸಂದೇಶಗಳಾಗಿವೆ. ಇವರಿಗೆ ದೊರೆತ ಪ್ರಶಸ್ತಿಗಳು: ಜ್ಞಾನಪೀಠ ಪುರಸ್ಕಾರ (ಶ್ರೀ ರಾಮಾಯಣ ದರ್ಶನಂ) (1968), ಕರ್ನಾಟಕ ರತ್ಮ(1992), ಪದ್ಮ ವಿಭೂಷಣ(1989), ಪದ್ಮ ಭೂಷಣ (1958), ಕನ್ನಡ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಶ್ರೀರಾಮಾಯಣ ದರ್ಶನಂ) (1955), ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. (1956), ರಾಷ್ಟ್ರಕವಿ ಪುರಸ್ಕಾರ (1964), ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (1966), ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (1969), ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ (1979), ಪಂಪ ಪ್ರಶಸ್ತಿ (1988), ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. * ಕುವೆಂಪು ಅವರ 113 ನೇ ಜನ್ಮ ದಿನದಂದು, ಗೂಗಲ್ ಇಂಡಿಯಾ ಅವರ ಗೌರವಾರ್ಥ ಡೂಡಲ್ ಪ್ರದರ್ಶಿಸಿತು (2017 ಡಿಸೆಂಬರ್ 29)