Job Description: 2020ನೇ ಸಾಲಿನ 'ಬೆಸ್ಟ್ ಮೆನ್ಸ್ ಪ್ಲೇಯರ್' ವೈಯಕ್ತಿಕ ಪ್ರಶಸ್ತಿಯನ್ನು ಪೋಲಾಂಡ್ ತಂಡದ ರಾಬರ್ಟ್ ಲೆವಾಂಡೋವ್ಸ್ಕಿರವರು ಪಡೆದುಕೊಂಡಿದ್ದಾರೆ. ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಕರೆಸಿಕೊಂಡಿರುವ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಚಿಯಾನೋ ರಿನಾಲ್ಡೋ ಅವರನ್ನು ಹಿಂದಿಕ್ಕಿ ರಾಬರ್ಟ್ ಲೆವಾಂಡೋವ್ಸ್ಕಿ ಫಿಫಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ವಿಶೇಷ * ಈ ವರ್ಷ 55 ಗೋಲ್ಗಳನ್ನು ಹೊಡೆದಿರುವ ಪೋಲಾಂಡ್ ದೇಶದ ಬೇಯ್ರ್ನ್ ಮ್ಯೂನಿಚ್ ತಂಡದ ನಾಯಕ ರಾಬರ್ಟ್ ಲೆವಾಂಡೋವ್ಸ್ಕಿ ರವರು ತಮ್ಮ ತಂಡ ದೇಶೀಯ ಮತ್ತು ಅಂತಾರಾಷ್ಟ್ರೀಯ ಟ್ರೋಫಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪ್ರಮುಖ ಪಾತ್ರವಹಿಸಿದ್ದಾರೆ. * ಈ ಫಿಫಾ ಪ್ರಶಸ್ತಿ ಆಯ್ಕೆಯನ್ನು ಜಾಗತಿಕ ಜ್ಯೂರಿಗಳು ಮತ್ತು ರಾಷ್ಟ್ರೀಯ ತಂಡಗಳ ನಾಯಕರು ಜೊತೆಗೆ ಅಭಿಮಾನಿಗಳು ಮತ ಚಲಾಯಿಸುವದರ ಮೂಲಕ ರಾಬರ್ಟ್ ಲೆವಾಂಡೋವ್ಸ್ಕಿರವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.