Job Description: # 2014ರಲ್ಲಿ ಸ್ಥಾಪನೆಕೊಂಡ ಲಂಡನ್ ವಾರ್ಕಿ ಫೌಂಡೇಷನ್ ನೀಡುವ ಜಾಗತಿಕ ಪ್ರಶಸ್ತಿ ಈ ಬಾರಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿ ಪ್ರಾಥಮಿಕ ಶಾಲೆಯ ಶಿಕ್ಷಕ ರಣಜಿತ್ಸಿನ್ಹಾ ದಿಸಾಲೆ ಪಡೆದುಕೊಂಡಿದ್ದಾರೆ. ಇವರು ಈ ಪ್ರಶಸ್ತಿಗೆ ಪಾತ್ರರಾಗುವ ಮೂಲಕ 7.5 ಕೋಟಿ ರೂ.ಗಳನ್ನು ಪ್ರಶಸ್ತಿ ರೂಪದಲ್ಲಿ ಪಡೆದುಕೊಂಡಿದ್ದಾರೆ. # ಗ್ರಾಮೀಣ ಪ್ರದೇಶಗಳಲ್ಲೂ ಕ್ಯು ಆರ್ ಕೋಡ್ ಮೂಲಕ ಸುಲಭ ರೀತಿಯಲ್ಲಿ ಪಠ್ಯಗಳನ್ನು ಪರಿಚಯಿಸಿದರು ವಿಡಿಯೋ ಪಾಠ, ಆಡಿಯೋ ಗೀತೆ, ಮಕ್ಕಳಿಗೆ ಇಷ್ಟವಾಗುವಂತಹ ಕಥೆಯನ್ನು ಇದರಲ್ಲಿ ಅಳವಡಿಸಿದ್ದರು. ಈ ಪಠ್ಯವನ್ನು ಮಹಾರಾಷ್ಟ್ರ ಸರ್ಕಾರ ಪ್ರಾಥಮಿಕ ಶಾಲಾ ಹಂತದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿತ್ತು. ಹಾಗೂ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು ಹೋರಾಟ ನಡೆಸಿದ ಖ್ಯಾತಿ ಶಿಕ್ಷಕ ರಣಜಿತ್ಸಿನ್ಹಾ ದಿಸಾಲೆ ಹೊಂದಿದ್ದಾರೆ.