Job Description: # 1960ರಲ್ಲಿ ಒಲಿಂಪಿಕ್ಸ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಅಥ್ಲೀಟ್ ರಾಫರ್ ಜಾನ್ಸನ್ ರವರು 1960ರ ರೋಮ್ ಒಲಿಂಪಿಕ್ನ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ಇತ್ತೀಚಿಗೆ ತಮ್ಮ 86 ವರ್ಷ ವಯಸ್ಸಿನಲ್ಲಿ ಲಾಸ್ ಏಂಜಲ್ಸ್ನಲ್ಲಿರುವ ಶರ್ಮನ್ ಓಕ್ಸ್ನಲ್ಲಿರುವ ತನ್ನ ನಿವಾಸದಲ್ಲಿ ಬುಧವಾರ (ಡಿ.2) ರಂದು ಕೊನೆಯುಸಿರೆಳೆದಿದ್ದಾರೆ. # 1955ರ ಕಾಲದಲ್ಲಿ ರಾಫರ್ ಜಾನ್ಸನ್ ಶ್ರೇಷ್ಠ ಅಥ್ಲೀಟ್ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. 1956ರ ರಾಷ್ಟ್ರೀಯ ಡೆಕ್ಲಾಥ್ಲಾನ್ನಲ್ಲಿ ಪ್ರಶಸ್ತಿ ಗೆದ್ದಿದ್ದ ರಾಫರ್ ಅದೇ ವರ್ಷ ಮೆಲ್ಬರ್ನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.