Job Description: ಚಂದ್ರನ ಅಧ್ಯಯನಕ್ಕಾಗಿ ಚೀನಾ ರಾಷ್ಟ್ರವು ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಪಡೆಯುವ ಸಲುವಾಗಿ ಚಾಂಗ್ -5 ಎಂಬ ಹೆಸರಿನ ಚಂದ್ರಯಾನವನ್ನು ನಡೆಸಿತ್ತು, ಇದೀಗ ಈ ಯೋಜನೆ ಯಶಸ್ವಿಯಾಗಿದ್ದು, ಚೀನಾದ ಬಾಹ್ಯಾಕಾಶ ಸಂಸ್ಥೆಯ ಚಾಂಗ್ -5 ಚಂದ್ರನ ಮೇಲ್ಮೈಗೆ ಯಶಸ್ವಿಯಾಗಿ ಇಳಿದಿದೆ. # 'ಓಷನ್ ಆಫ್ ಸ್ಟಾರ್ಮ್ಸ್' ಎಂದು ಕರೆಯಲ್ಪಡುವ ಬೃಹತ್ ಲಾವಾ ಬಯಲಿನಲ್ಲಿ ಚಂದ್ರನ ಮಾದರಿಗಳನ್ನು ಸಂಗ್ರಹಿಸಲು ಚೀನಾ ದೇಶವು ನವೆಂಬರ್ 24ರಂದು ಚಂದ್ರಯಾನದ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. # ಚೀನಾ ತನ್ನ ಮೊದಲ ಚಂದ್ರಯಾನವನ್ನು 2013 ರಲ್ಲಿ ಮಾಡಿದೆ. # 2019ರ ಜನವರಿಯಲ್ಲಿ, ಚಾಂಗ್-4 ಚಂದ್ರನ ದೂರದ ಭಾಗ ತಲುಪಿತ್ತು. # ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಂತರ ಚಂದ್ರನ ಮಾದರಿಗಳನ್ನು ಪಡೆಯುವ ಮೂರನೇ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.