Job Description: ನವದೆಹಲಿ: ಭಾರತೀಯ ಸೇನೆಯು ಹತ್ತು ಹಲವು ಶಸ್ತ್ರಾಸ್ತಗಳ ಪರೀಕ್ಷಿಸಿ ಸೇನೆಗೆ ನಿಯೋಜನೆಗೊಳಿಸುತ್ತಿದೆ. ಇದೀಗ ಈ ಪಟ್ಟಿಗೆ ನೂತನ ಅಸ್ತ್ರವೊಂದು ಸೇರ್ಪಡೆಗೊಂಡಿದ್ದು, ಭಾರತೀಯ ನೌಕಾಸೇನೆಗೆ ಅಮೆರಿಕಾದ 2 ಪ್ರಿಡೇಟರ್ ಡ್ರೋನ್ಗಳು ಸೇರಿಕೊಂಡಿವೆ. ಈ ಡ್ರೋನ್ ಗಳನ್ನೂ ಅಮೇರಿಕಾದಿಂದ ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದ್ದು, ಒಟ್ಟು ಒಂದು ವರ್ಷದ ಅವಧಿಗೆ ಇವುಗಳನ್ನು ಪಡೆಯಲಾಗಿದೆ. ಇವುಗಳ ಸತತ 30 ಗಂಟೆಗಳ ಕಾಲ ಹಾರಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈಗಾಗಲೇ ನೌಕಾಪಡೆಯಲ್ಲಿ ಸೇವೆಗೆ ನಿಯೋಜನೆಗೊಂಡಿವೆ.