Job Description: ಬೆಂಗಳೂರು : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ (ISRO) ಶುಕ್ರ ಗ್ರಹ ಅನ್ವೇಷಣೆಗಾಗಿ ಕೈಗೊಳ್ಳುತ್ತಿರುವ ಯೋಜನೆಯಲ್ಲಿ ಸ್ವೀಡನ್ ರಾಷ್ಟ್ರವು ಜೊತೆಗೂಡಲಿದೆ ಎಂದು ಇತ್ತೀಚಿಗೆ ಸ್ವೀಡನ್ ದೇಶದ ರಾಯಭಾರಿ ಕ್ಲಾಸ್ ಮೊಲೀನ್ ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ 'ಬೆಂಗಳೂರು ತಂತ್ರಜ್ಞಾನ ಮೇಳ-2020' ರಲ್ಲಿ ಸಂವಾದ ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ ಇವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿರುವ ಭಾರತ ಹಾಗೂ ಸ್ವೀಡನ್ ದೇಶಗಳ ಸಹಯೋಗ ಇನ್ನಷ್ಟು ಬೆಳೆಯಲಿದೆ ಎಂದರು.