Job Description: ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ಸಚಿವಾಲವು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆಗಳು, ಕಾರ್ಖಾನೆಗಳು ಸೇರಿ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳವರೆಗೂ ಹೆಚ್ಚಳ ಮಾಡಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಮೊದಲು ಪ್ರತಿ ದಿನದ ಗರಿಷ್ಠ ಕೆಲಸದ ಅವಧಿ ಕೇವಲ 9 ಗಂಟೆಗಳಾಗಿತ್ತು, ಆದರೆ ಇದೀಗ 12 ಗಂಟೆಗೆ ಹೆಚ್ಚಿಸಿದೆ ಮತ್ತು ವಾರಕ್ಕೆ ಗರಿಷ್ಠ ಕೆಲಸದ ಅವಧಿಯನ್ನು 48 ಗಂಟೆಗಳಿಗೆ ನಿಗದಿಪಡಿಸಿದೆ. * 12 ಗಂಟೆಯ ಅವಧಿಯಲ್ಲಿ ಒಂದು ಗಂಟೆ ವಿಶ್ರಾಂತಿ ಅವಧಿಯನ್ನು ಒಳಗೊಂಡಿದೆ. * ಸತತ 5 ಗಂಟೆಗಿಂತ ಹೆಚ್ಚಿಗೆ ಕೆಲಸ ಮಾಡುವಂತಿಲ್ಲ ಮಧ್ಯ ಕನಿಷ್ಠ ಅರ್ಧ ಗಂಟೆ ವಿಶ್ರಾಂತಿ ಅಗತ್ಯವಿದೆ. * ಕಾರ್ಮಿಕರ ಸುರಕ್ಷತೆ, ಆರೋಗ್ಯ, ಕೆಲಸದ ಸ್ಥಿತಿಗತಿಗಳನ್ನು ಆಧರಿಸಿ ಕೇಂದ್ರ ಕಾರ್ಮಿಕ ಸಚಿವಾಲವು ಈ ನಿರ್ಧಾರ ಕೈಗೊಂಡಿದ್ದು, ಏನಾದರು ಆಕ್ಷೆಪನೆಗಳಿದ್ದಲ್ಲಿ 45 ದಿನಗಳ ಒಳಗೆ ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿದೆ.