Job Description: ಹಲವು ದಿನಗಳಿಂದ ಬೇಡಿಕೆಯಿದ್ದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಈ ನಿಗಮ ಸ್ಥಾಪನೆಯಿಂದಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಈ ಸಮುದಾಯದ ಬಡವರಿಗೆ ಹಾಗೂ ಹಿಂದುಳಿದವರಿಗೆ ವಿವಿಧ ಸೌಲಭ್ಯ ಹಾಗೂ ಅನುಕೂಲ ಒದಗಿಸಿಕೊಡಲು ಅನುಕೂಲವಾಗಲಿದೆ. * ಇತ್ತೀಚಿಗಷ್ಟೇ ಮುಖ್ಯಮಂತ್ರಿಗಳು ಮರಾಠ ನಿಗಮ ಸ್ಥಾಪನೆಗೆ ಆದೇಶಿಸಿದ್ದರು. ಹಾಗೂ ಕೆಲ ದಿನಗಳ ಹಿಂದೆ ಕಾಡುಗೊಲ್ಲ ನಿಗಮ ಕೂಡ ಸ್ಥಾಪನೆ ಮಾಡಲಾಗಿದೆ.