Job Description: ದುಬೈ : ದುಬೈನ ಜಗತ್ಪ್ರಸಿದ್ಧ ವಾಟರ್ಫ್ರಂಟ್ ಪಾಮ್ ಜುಮೈರಾ ಪ್ರದೇಶದ ದಿ ಪಾಯಿಂಟ್ನಲ್ಲಿ ಪ್ರಪಂಚದ ಅತಿದೊಡ್ಡ ಕಾರಂಜಿಯನ್ನು ಸ್ಥಾಪಿಸಲಾಗಿದ್ದು, ಈ ವರ್ಣರಂಜಿತ ಕಾರಂಜಿಯು ಪ್ರಪಂಚದ ಅತಿ ದೊಡ್ಡ ವಾಟರ್ ಫೌಂಟನ್ ಎಂಬ ಗಿನ್ನಿಸ್ ವಿಶ್ವ ದಾಖಲೆ ಬರೆದಿದೆ. * ಈ ವಾಟರ್ ಪೌಂಟೇನ್ ಕಾರಂಜಿಯು ಸಮುದ್ರದ ನೀರಿನಲ್ಲಿ 14,000 ಚದರ ಅಡಿಗಳಷ್ಟು ವಿಸ್ತಾರದಲ್ಲಿ ನಿರ್ಮಿಸಲಾಗಿದೆ. * ಒಟ್ಟು 105 ಮೀಟರ್ಗಳಷ್ಟು ಎತ್ತರಕ್ಕೆ ಬಣ್ಣ ಬಣ್ಣದ ನೀರನ್ನು ಈ ಕಾರಂಜಿಯು ಚಿಮ್ಮಿಸುತ್ತದೆ. * ದಕ್ಷಿಣ ಕೊರಿಯಾದ ಬಾನ್ಪೋ ಮೂನ್ಲೈಟ್ ರೈನ್ಬೋ ಫೌಂಟನ್ 2,519 ಚದರ ಮೀಟರ್ಗಳಷ್ಟು ವಿಸ್ತಾರವಾಗಿದ್ದು, ಇಲ್ಲಿಯವರೆಗಿನ ದೊಡ್ಡ ಕಾರಂಜಿ ಎನಿಸಿತ್ತು. * ಈ ಕಾರಂಜಿಗೆ ಒಟ್ಟು 3,000ಕ್ಕೂ ಅಧಿಕ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ.