Job Description: ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯು ಒಡಿಶಾ ರಾಜ್ಯದ ಕರಾವಳಿಯಲ್ಲಿ 'ಪಿನಾಕಾ ರಾಕೆಟ್ ವ್ಯವಸ್ಥೆ'ಯ ನೂತನ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. DRDO ದಿಂದ ದೇಶಿಯ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಲಾದ ಪಿನಾಕಾ ರಾಕೆಟ್ ವ್ಯವಸ್ಥೆಯನ್ನು ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಲಾಯಿತು. * ಪಿನಾಕಾ ರಾಕೆಟ್ಗಳ ವ್ಯಾಪ್ತಿ ಸುಮಾರು 37 ಕಿ.ಮೀ. * ಪಿನಾಕಾ ರಾಕೆಟ್ ಪರೀಕ್ಷೆ ವೇಳೆ ಒಟ್ಟು ಆರು ರಾಕೆಟ್ಗಳನ್ನು ಸರಣಿಯಲ್ಲಿ ಉಡಾಯಿಸಲಾಯಿತು ಹಾಗೂ ಎಲ್ಲಾ ಪರೀಕ್ಷೆಗಳು ಸಂಪೂರ್ಣ ಯಶಸ್ವಿಯಾದವು. * ಶಿವನ ಬಿಲ್ಲಿನ ಹೆಸರಿನ ಪಿನಾಕಾ ರಾಕೆಟ್ಗಳು ಬಹು-ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆಗಳ ಭಾಗವಾಗಿವೆ.