Job Description: ಬೆಂಗಳೂರು : ಇತ್ತೀಚಿಗೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವಾಲಯವು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ಮಹಾನಗರಗಳ ಅಪಘಾತದ ವರದಿಯನ್ನು ಬಿಡುಗಡೆಗೊಳಿಸಿದ್ದು, ಈ ವರದಿಯ ಪ್ರಕಾರ ರಾಜ್ಯದ ಬೆಂಗಳೂರು ನಗರವು 3ನೇ ಸ್ಥಾನ ಪಡೆದಿದ್ದು, ಕಳೆದ ವರ್ಷ ನಗರದಲ್ಲಿ 4,684 ರಸ್ತೆ ಅಪಘಾತ ಸಂಭವಿಸಿ, ಒಟ್ಟು 768 ಜನರು ಸಾವಿಗೀಡಾಗಿದ್ದಾರೆ. * 2018 ಮತ್ತು 2019 ರಲ್ಲಿಯು ಬೆಂಗಳೂರು ನಗರ 3ನೇ ಸ್ಥಾನದಲ್ಲಿಯೇ ಮುಂದುವರೆದಿದೆ. * ಇನ್ನು ಅತಿ ಹೆಚ್ಚು ಅಪಘಾತ ಸಂಭವಿಸಿದ ಮಹಾನಗರದ ಪೈಕಿ ಚೆನ್ನೈ ಪ್ರಥಮ ಸ್ಥಾನ ಪಡೆದಿದ್ದು, ಇಲ್ಲಿ ಒಟ್ಟು 6871 ಅಪಘಾತಗಳ ಪೈಕಿ ನಡೆದಿದ್ದರೆ 1252 ಜನರು ಸಾವಿಗೀಡಾಗಿದ್ದಾರೆ. * ದೆಹಲಿ ಮಹಾನಗರವು 2ನೇ ಸ್ಥಾನದಲ್ಲಿದ್ದು, 5601 ಅಪಘಾತಗಳ ಪೈಕಿ 1463 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.