Job Description: ಶ್ರೀನಗರ : ಜಮ್ಮು-ಕಾಶ್ಮೀರ ಅಧಿಕೃತ ಭಾಷಾ ಅಧಿನಿಯಮ 2020ಕ್ಕೆ ರಾಷ್ಟ್ರಪತಿ ರಾಮನಾಥ್ ಕೊವಿಂದ ಅವರು ಅನುಮೋದನೆ ನೀಡಿದ್ದು, ಇದನ್ನು ಸರಕಾರದ ಗೆಜೆಟ್(ರಾಜ್ಯಪತ್ರ)ದಲ್ಲಿ ಪ್ರಕಟಿಸಿರುವದಾಗಿ ಕೇಂದ್ರ ಸರಕಾರ ತಿಳಿಸಿದೆ. ಈ ಮೊದಲು ಜಮ್ಮು ಕಾಶ್ಮೀರವು ಕೇವಲ ಉರ್ದು ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಅಧಿಕೃತ ಭಾಷೆಯನ್ನಾಗಿ ಹೊಂದಿತ್ತು, ಇದೀಗ ಈ ಪಟ್ಟಿಯಲ್ಲಿ ಕಾಶ್ಮೀರಿ, ಡೋಗ್ರಿ ಮತ್ತು ಹಿಂದಿ ಭಾಷೆಯನ್ನು ಸೇರ್ಪಡೆ ಮಾಡಲು ಹೊಸ ಅಧಿನಿಯಮ ಅವಕಾಶ ನೀಡಿದೆ. * ಜಮ್ಮು-ಕಾಶ್ಮೀರ ಅಧಿಕೃತ ಭಾಷಾ ಮಸೂದೆ 2020 ನ್ನು ಸೆಪ್ಟಂಬರ್ 22 ರಂದು ಲೋಕಸಭೆಯಲ್ಲಿ ಹಾಗೂ ಸೆಪ್ಟಂಬರ್ 23ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು.