Job Description: ಮುಂಬೈ: ಭಾರತೀಯ ನೌಕಾಪಡೆಯಲ್ಲಿ ತನ್ನ ಸುದೀರ್ಘ 30 ವರ್ಷಗಳ ಸೇವೆ ಸಲ್ಲಿಸಿದ ಐಎನ್ಎಸ್ ವಿರಾಟ್ ನೌಕೆಯು ದಿನಾಂಕ ಸೆಪ್ಟೆಂಬರ್ 19 ರಂದು ವಿದಾಯದ ಮೂಲಕ ಗುಜರಿಗೆ ಸೇರಲಿದೆ. ಈ ಬೃಹತ್ ನೌಕೆಯನ್ನು ಕಳಚಿ, ಗುಜರಿಯಾಗಿಸುವ ವ್ಯವಸ್ಥೆ ಗುಜರಾತ್ ನ ಅಲಾಂಗ್ನಲ್ಲಿದೆ. * ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ಐಎನ್ಎಸ್ ವಿರಾಟ್ಗೆ ಬೀಳ್ಕೊಡುಗೆ ನೀಡಲಾಯಿತು. ಈ ವಿದಾಯ ಸಮಾರಂಭದಲ್ಲಿ ಹಲವಾರು ನೌಕಾಪಡೆಯ ಹಿರಿಯ ಮತ್ತು ಮಾಜಿ ಅಧಿಕಾರಿಗಳು, ಯೋಧರು ಭಾಗಿಯಾದರು. * ಭಾರತದ ನೌಕಾಪಡೆ ಸೇರ್ಪಡೆಯಾಗುವ ಮೊದಲು ಈ ನೌಕೆಯು 1959 ರಿಂದ 1986ರ ವರೆಗೆ ಬ್ರಿಟನ್ನ 'ರಾಯಲ್ ನೇವಿ'ಯಲ್ಲಿ ಸೇವೆ ಆರಂಭಿಸಿದ ಇದು 1986ರಲ್ಲಿ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. * ಒಟ್ಟು 65 ದಶಲಕ್ಷ ಡಾಲರ್ಗೆ ಈ ನೌಕೆಯನ್ನು ಖರೀದಿಸಲಾಗಿತ್ತು. * 1987 ರಿಂದ ಸೇವೆ ಆರಂಭಿಸಿ 2017ರಲ್ಲಿ ನಿವೃತ್ತಿ ಪಡೆಯಿತು.