Job Description: ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರವನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಳವಡಿಸಿಕೊಳ್ಳುವದಿಲ್ಲ ಎಂದು ತಮಿಳು ನಾಡು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ ದ್ವಿಭಾಷಾ ಸೂತ್ರವನ್ನೇ ಮುಂದುವರಿಸುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ತಮಿಳುನಾಡು ರಾಜ್ಯದಲ್ಲಿ ಈ ಮೊದಲಿನಿಂದಲೂ ದ್ವಿಭಾಷಾ ಸೂತ್ರವನ್ನೇ ಅನುಸರಿಸುತ್ತ ಬಂದಿದ್ದು, ಯಶಸ್ವಿ ಕೂಡ ಆಗಿದೆ. ಹಾಗೂ ಬರುವ ದಿನಗಲ್ಲಿ ಕೂಡ ಯಾವುದೇ ಕಾರಣಕ್ಕೂ ದ್ವಿಭಾಷಾ ಸೂತ್ರವನ್ನು ಕೈಬಿಡುವದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಪತ್ರದ ಮೂಲಕ ತಮಿಳುನಾಡು ಶಿಕ್ಷಣ ಸಚಿವ ಕೆ.ಪಿ. ಅನ್ಬಳಗನ್ ತಿಳಿಸಿದ್ದಾರೆ.