Job Description: ನವದೆಹಲಿ: ಇತ್ತೀಚಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅಟಲ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ನಾವೀನ್ಯ ಹಾಗೂ ಆವಿಷ್ಕಾರದಲ್ಲಿ ಉತ್ತಮ ಸಾಧನೆ ತೋರಿದ ಸಂಸ್ಥೆಗಳಿಗೆ ಈ ರ್ಯಾಂಕಿಂಗ್ನೀಡಲಾಗುತ್ತಿದ್ದು, ಇಲ್ಲಿ ಸ್ಥಾನ ಪಡೆದ ಸಂಸ್ಥೆಗಳಿಗೆ ಕೇಂದ್ರದ ಅನುದಾನ ನೀಡಲಾಗುವದು. ಇದು ARIIA(Atal Ranking of Institutions on Innovation Achievements), ಮಾನವ ಅಭಿವೃದ್ಧಿ ಸಚಿವಾಲಯದ ಉಪಕ್ರಮವಾಗಿದ್ದು, ನಾವೀನ್ಯ ಆವಿಷ್ಕಾರಗಳನ್ನು ಪರಿಗಣಿಸಿ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ರ್ಯಾಂಕ್ ನೀಡಲಾಗುತ್ತದೆ. * ಅಟಲ್ ರ್ಯಾಂಕಿಂಗ್ ಪೈಕಿ ಕೇಂದ್ರದ ಅನುದಾನ ಪಡೆಯುವಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISC) 4ನೇ ರ್ಯಾಂಕ್ ಪಡೆದಿದೆ. * ರಾಜ್ಯದ ಅನುದಾನ ಪಡೆಯುವ ಸ್ವಾಯತ್ತ ಸಂಸ್ಥೆಗಳ ಪೈಕಿ PES ಎಂಜಿನಿಯರಿಂಗ್ ಕಾಲೇಜು ಎರಡನೇ ಸ್ಥಾನ ಪಡೆದಿದೆ. * ಕೇಂದ್ರದ ಅನುದಾನ ಪಡೆಯುವ ಸಂಸ್ಥೆಗಳ ವಿಭಾಗದಲ್ಲಿ ಮದ್ರಾಸ್, ಬಾಂಬೆ ಹಾಗೂ ದೆಹಲಿಯ ಐಐಟಿಗಳು ಕ್ರಮವಾಗಿ ಮೊದಲ ಮೂರು ರ್ಯಾಂಕ್ ಪಡೆದಿವೆ. ರಾಜ್ಯದ ಧನಸಹಾಯ ಪಡೆಯುವ ವಿಶ್ವವಿದ್ಯಾಲಯಗಳ(ವಿ.ವಿ) ವಿಭಾಗದಲ್ಲಿ 1) ICT, ಮಹಾರಾಷ್ಟ್ರ, 2)ಪಂಜಾಬ್ ವಿ.ವಿ ಹಾಗೂ 3 ನೇ ಸ್ಥಾನವನ್ನು ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿ.ವಿ ಪಡೆದಿವೆ. * ರಾಜ್ಯದ ಧನಸಹಾಯ ಪಡೆಯುವ ಸ್ವಾಯತ್ತ ಸಂಸ್ಥೆಗಳ ವಿಭಾಗದಲ್ಲಿ 1) ಕಾಲೇಜ್ ಆಫ್ ಇಂಜಿನಿಯರಿಂಗ್, ಪುಣೆ, ೨)ಪಿಇಎಸ್, ಬೆಂಗಳೂರು