Job Description: ನವದೆಹಲಿ: ಭಾರತವು ಮಾರಿಷಸ್ ರಾಷ್ಟ್ರದ ಸಹಾಯ ಹಸ್ತ ಚಾಚಿದ್ದು, ಭಾರತದ ವಾಯುಪಡೆಯ ವಿಮಾನವೊಂದು 30 ಟನ್ ಪ್ರಮಾಣದ ತಾಂತ್ರಿಕ ಉಪಕರಣಗಳು ಮತ್ತು ವಸ್ತುಗಳನ್ನು ಮಾರಿಷಸ್ ದೇಶಕ್ಕೆ ಇತ್ತೀಚಿಗೆ ರಫ್ತು ಮಾಡಿದೆ. ಮಾರಿಷಸ್ ರಾಷ್ಟ್ರದ ಸರ್ಕಾರವು ವಾಯುವ್ಯ ಕರಾವಳಿಯಲ್ಲಿ ತೈಲ ಸೋರಿಕೆಯಿಂದ ಉಂಟಾಗಿರುವ ಪರಿಸರ ಹಾನಿಯನ್ನು ನಿರ್ವಹಿಸಲು ಸಹಾಯ ನೀಡುವಂತೆ ಭಾರತವನ್ನು ಮನವಿ ಮಾಡಿದ ಹಿನ್ನಲೆ ಭಾರತವು ಈ ಸಹಾಯ ಹಸ್ತಚಾಚಿದೆ. * ಸಾಗರದ ಬೂಮ್, ಡಿಸ್ಕ್ ಸ್ಕಿಮ್ಮರ್, ಹೆಲಿ ಸ್ಕಿಮ್ಮರ್, ಪವರ್ ಪ್ಯಾಕ್ಗಳು, ಬ್ಲೋವರ್ಗಳು, ಸಾಲ್ವೇಜ್ ಬಾರ್ಜ್ ಸೇರಿದಂತೆ ಇತರ ಪರಿಕರಗಳನ್ನು ಒದಗಿಸಲಾಗಿದೆ. ಇವುಗಳು ತೈಲ ಸೋರಿಕೆಯನ್ನು ತಡೆಯಲು, ನೀರಿನಿಂದ ತೈಲವನ್ನು ಹೊರಗೆಳೆಯಲು, ನೀರನ್ನು ಸ್ವಚ್ಛಗೊಳಿಸಲು ಬಳಸಲಾಗಿದೆ ಎಂದು ಹೇಳಿದೆ.