Job Description: ನವದೆಹಲಿ: ಚಂದ್ರಯಾನ-2 ಗಗನನೌಕೆಯ ಆರ್ಬಿಟರ್ ಪರಿಶೋಧಿಸಿರುವ ಚಂದ್ರನ ಅಂಗಳದ ಕುಳಿಗೆ (ಕ್ರೇಟರ್) ಭಾರತದ ಹೆಸರಾಂತ ಭೌತ ವಿಜ್ಞಾನಿ, ಹಾಗೂ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾದ ವಿಕ್ರಂ ಸಾರಾಭಾಯ್ ಹೆಸರಿಡುವುಕಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಧರಿಸಿದೆ. ಇದೆ ಆಗಸ್ಟ್ 12 ರಂದು ಅವರ ಜನ್ಮ ಶತಮಾನೋತ್ಸವ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸೂಚಿಸಲು ಇಸ್ರೊ ಈ ನಿರ್ಧಾರ ಮಾಡಿದೆ. ಚಂದ್ರಯಾನ-2 ಟೆರಾಯ್್ನ ಮ್ಯಾಪಿಂಗ್ ಕ್ಯಾಮೆರಾಗಳ ಮೂಲಕ ಈ ಕುಳಿಯ 3ಡಿ ಚಿತ್ರಗಳನ್ನು ಪಡೆಯಲಾಗಿದ್ದು, ಸುಮಾರು 1.70 ಕಿ.ಮೀ ಆಳ, 25ರಿಂದ 35 ಡಿಗ್ರಿಗಳಷ್ಟು ಇಳಿಜಾರನ್ನು ಈ ಕೂಲಿ ಹೊಂದಿದೆ.