Job Description: ಶಿವಮೊಗ್ಗ: ಖ್ಯಾತ ಲೇಖಕರಾದ ಆರ್.ಕೆ. ನಾರಾಯಣ್ ಅವರ `ಮಾಲ್ಗುಡಿ ಡೇಸ್' ಕೃತಿಯನ್ನು ಧಾರಾವಾಹಿಯಾಗಿ ನಿರ್ಮಿಸಿದ್ದ ದಿವಂಗತ ಶಂಕರನಾಗ್ ಅವರು ಅರಸಾಳು ರೈಲ್ವೇ ನಿಲ್ದಾಣವನ್ನು ಚಿತ್ರೀಕರಣದಲ್ಲಿ ಪ್ರಮುಖವಾಗಿ ಬಳಸಿಕೊಂಡಿದ್ದರು. ಹಾಗೂ ಈ ದಾರಾವಾಹಿಯು ಅಪಾರ ಜನ ಮನ್ನಣೆ ಪಡೆದಿತ್ತು. ಈ ನೆನಪಿಗಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಸ್ಟೇಷನನ್ನು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು, ಈ ನಿಲ್ದಾಣವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.