Job Description: ಕೊಲಂಬೊ: ಶ್ರೀಲಂಕಾದ ಮಾಜಿ ಅಧ್ಯಕ್ಷರಾಗಿರುವ ಮಹಿಂದ ರಾಜಪಕ್ಸ ಅವರು ದಿನಾಂಕ 09 ಅಗಸ್ಟ 2020 ರಂದು ನಾಲ್ಕನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಇತಿಹಾಸ ಪ್ರಸಿದ್ಧ ಬೌದ್ಧ ದೇವಾಲಯವೊಂದರಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 74 ವರ್ಷದ ನಾಯಕರಾದ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾ ದೇಶದ ಒಂಬತ್ತನೇ ಸಂಸತ್ತಿನ ಚುನಾವಣೆಯಲ್ಲಿ ವೈಯಕ್ತಿಕ 5,00,000 ಆದ್ಯತೆಯ ಮತಗಳನ್ನು ಪಡೆದು ಶ್ರೀಲಂಕಾದ ಚುನಾವಣಾ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್ಎಲ್ಪಿಪಿ)ಯು ಶ್ರೀಲಂಕಾ ಸಂಸತ್ನ ಚುನಾವಣೆಯಲ್ಲಿ ರಾಜಪಕ್ಸೆ ನೇತೃತ್ವದಲ್ಲಿ ಒಟ್ಟಾರೆ 225 ಕ್ಷೇತ್ರಗಳ ಪೈಕಿ 145 ಕ್ಷೇತ್ರಗಳಲ್ಲಿ ವಿಜಯಸಾಧಿಸಿದೆ. ಜೊತೆಗೆ ಮಿತ್ರಪಕ್ಷಗಳು 5 ಕ್ಷೇತ್ರಗಳಲ್ಲಿ ಗೆದ್ದಿದ್ದು, ಮೈತ್ರಿಕೂಟದ ಸಂಖ್ಯೆ 150ಕ್ಕೇರಿದ್ದು, ರಾಜಪಕ್ಷೆ ಅಧಿಕಾರ ಸ್ವೀಕರಿಸಲಿದ್ದಾರೆ. * ಮಹಿಂದಾ ರಾಜಪಕ್ಸ ಅವರ ಸೋದರ ಗೋಟಬಯಾ ರಾಜಪಕ್ಸ ಅವರು ಸದ್ಯ ದೇಶದ ಅಧ್ಯಕ್ಷರಾಗಿದ್ದಾರೆ.