Job Description: ವಿಶ್ವ ಶ್ರೀಮಂತರ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ಏಷ್ಯಾದ ಏಕೈಕ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಕೇಶ್ ಅಂಬಾನಿ ಅವರು ಇದೀಗ 4 ನೇ ಸ್ಥಾನವನ್ನು ಪಡೆದಿದ್ದಾರೆ. ಜಾಗತಿಕವಾಗಿ ಕೊರೊನಾ ಮಹಾಮಾರಿಯಿಂದಾಗಿ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದ ಹಿನ್ನಲೆ ಬಹುತೇಕ ಉದ್ಯಮಿಗಳ ಸಂಪತ್ತು ಕಡಿಮೆಯಾಗಿತ್ತು, ಆದರೆ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ. * ಜನವರಿ ಯಿಂದ ಆಗಸ್ಟ್ ತಿಂಗಳವರೆಗೆ ಅಂಬಾನಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹತ್ತು ಸ್ಥಾನಗಳ ಬಡ್ತಿ ಪಡೆದುಕೊಂಡಿದ್ದಾರೆ. ಹಾಗೂ ಅವರ ಅಸ್ತಿ ಮೌಲ್ಯ 22 ಬಿಲಿಯನ್ ಡಾಲರ್ ನಷ್ಟು ಹೆಚ್ಚಳ ಕಂಡಿದೆ. * ಪ್ರಸ್ತುತ ಮುಕೇಶ್ ಅಂಬಾನಿಯವರ ಒಟ್ಟು ಆಸ್ತಿ ಮೌಲ್ಯ ಈಗ 80.6 ಬಿಲಿಯನ್ ಡಾಲರ್ ಗಳೆಂದು ಅಂದಾಜಿಸಲಾಗಿದೆ