Job Description: ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಟಿ20 ಕ್ರಿಕೆಟ್ ಟೂರ್ನಿಗೆ ಪ್ರಾಯೋಜಕತ್ವ ವಹಿಸಿದ್ದ ಚೀನಾ ಮೂಲದ ಮೊಬೈಲ್ ಕಂಪನಿ ವಿವೊ ಪ್ರಾಯೋಜಕತ್ವ ಈ ವರ್ಷ ಇರುವದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಭಾರತ ಮತ್ತು ಚೀನಾ ರಾಷ್ಟ್ರಗಳ ಗಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ಭವಿಸಿದ ಸಂಘರ್ಷದ ಹಿನ್ನಲೆ, ಭಾರತದಲ್ಲಿ ಚೀನಾ ಮೂಲದ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭಗೊಂಡಿತ್ತು. ಇದಲ್ಲದೆ ಭಾರತ ಸರ್ಕಾರವು ಚೀನಾ ದೇಶದ ನೂರಾರು app ಗಳನ್ನೂ ನಿಷೇಧಿಸಿತು. ಇದೀಗ IPL ಗೆ ಪ್ರಾಯೋಕತ್ವ ಹೊಂದಿರುವ ವಿವೊವನ್ನು ಕೈಬಿಡಬೇಕೆಂದು ಒತ್ತಾಯದ ಮೇರೆಗೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.