Job Description: ನವದೆಹಲಿ: ಭಾರತೀಯ ಪ್ರತಿಷ್ಠಿತ ಸುದ್ದಿ ಸಂಸ್ಥೆಯಾದ ಇಂಡಿಯಾ ಟುಡೇ ಸಂಸ್ಥೆಯು 'ಮೂಡ್ ಆಫ್ ದಿ ನೇಷನ್' (ಎಂಓಟಿಎನ್) ಸಮೀಕ್ಷೆ ನಡೆಸಿದ್ದು, ನರೇಂದ್ರ ಮೋದಿಯವರು ಭಾರತ ಇದುವರೆಗೆ ಕಂಡ ಅತ್ಯುತ್ತಮ ಪ್ರಧಾನಿ ಎಂದು ತಿಳಿಸಿದೆ. ಈ ಸಮೀಕ್ಷೆಯಲ್ಲಿ ಒಟ್ಟು 12000 ಜನರನ್ನು ಬಾಗಿಯಾಗಿಸಲಾಗಿತ್ತು, ಈ ಪೈಕಿ ಶೇಕಡ 66 ಮಂದಿ, ಮುಂದಿನ ಅವಧಿಗೂ ಮೋದಿಯವರೇ ಪ್ರಧಾನಿ ಆಗಬೇಕೆಂಬ ಅಭಿಮತ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಸಮೀಕ್ಷೆಯಲ್ಲಿ ಶೇ. 8 ಮತ ಗಳಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ದೇಶದ ಉತ್ತಮ ಮುಖ್ಯಮಂತ್ರಿ ಸಮೀಕ್ಷೆಯ ಫಲಿತಾಂಶದಿಂದ ತಿಳಿದುಬಂದಿದೆ. ಇನ್ನುಳಿದಂತೆ ಶೇಕಡ 17 ಮಂದಿ 'ಸರಾಸರಿ' ಹಾಗೂ ಶೇಕಡ 5 ಮಂದಿ 'ಕಳಪೆ' ಎಂದು ಮೋದಿಯವರ ಕುರಿತ ಅಭಿಪ್ರಾಯ ತಿಳಿಸಿದ್ದಾರೆ.