Job Description: ಮಣಿಪಾಲ: 2020 ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರಿಗಾಗಿ "ಕಿಸಾನ್ ರೈಲು"ಗಳನ್ನು ಜಾರಿಗೆ ತರುವ ಬಗ್ಗೆ ಯೋಜನೆ ರೂಪಿಸಿರುವ ಬಗ್ಗೆ ತಿಳಿಸಿದ ಹಿನ್ನಲೆ ದೇಶದಲ್ಲಿ ದಿನಾಂಕ 07 ಆಗಸ್ಟ್ 2020 ರಂದು ದೇಶದಲ್ಲಿ ಮೊದಲ ಬಾರಿಗೆ “ಕಿಸಾನ್ ರೈಲು’ ಇಂದು ತನ್ನ ಮೊದಲ ಸೇವೆಯನ್ನು ಆರಂಭಿಸಿತು. * ಮೊದಲ ಪ್ರಯಾಣ : ತರಕಾರಿಗಳು ಮತ್ತು ಹಣ್ಣುಗಳನ್ನು ಹೊತ್ತ ಯೋಜನೆಯ ಮೊದಲ ರೈಲು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಪ್ರಯಾಣಿಸಲಿದೆ. * ಏನಿದರ ಉದ್ದೇಶ? ಹೆಚ್ಚು ದಿನ ದಾಸ್ತಾನು ಮಾಡಲಾಗದ ಹಾಗು ಬೇಗನೇ ನಾಶಗೊಳ್ಳುವ ಕೃಷಿ ಬೆಳೆಗಳನ್ನು ದೇಶದ ವಿವಿಧ ಭಾಗಗಳಿಗೆ ಸುಲಭವಾಗಿ ಸಾಗಿಸುವುದರ ಮೂಲಕ ಬೆಳೆದ ಬೆಳೆಗೆ ನ್ಯಾಯ ಒದಗಿಸುವದು ಇದರ ಮುಖ್ಯ ಉದ್ದೇಶವಾಗಿದೆ.